ನೆನಪಿನ ನೌಕೆ
ಸಾಲದು ಗೆಳತಿ
ನಿನ್ನೆದೆಯ ಲೋಕಕೆ!
ಪಯಣಿಸಲಿ ಹೇಗೆ,
ಕಂಗಳ ಕಾಂತಿಗೆ
ಸ್ಪರ್ಶದ ಮಿಂಚಿಗೆ
ಹುಚ್ಚೇರಿದೆ ಮನಕಡಲಿಗೆ
ಚಿಂತಿಸದಿರು ನೀ
ಉಸಿರಲಿ ಹಿಡಿದಿರುವೆ
ನಿನ್ನ ಪರಿಮಳವ;
ಕಂಪಿನ ಜಾಡನು ಹಿಡಿವೆ
ಒಲವಲಿ ಹೊಳೆಯುವ
ನಿನ್ನ ಕಣ್ ತಾರಾಗಣವ
ಅನುಸರಿಸಿ ಬರುವೆ!
ನಿನ್ನೆದೆಯ ಲೋಕಕೆ!
ಪದ ನಾಲ್ಕು ಸಾಲಾಗಿ
May 29, 2010
Sep 7, 2009
ಮುನ್ನ
ಪೂಜೆಗೆ ಕಾಯ್ ಒಡೆದು ಕೊಡುವ ಚಿಣ್ಣ,
ಜಗುಲಿಯ ಮೇಲೆ ನಿಂತು ಕಾಯುತಿರುವನು
ಹರಿದ ಬಟ್ಟೆ ತೊಟ್ಟವನು
ಕೊಳೆಯ ಮೈಯವನು
ಆದರೆ ತೇಜ ಕಂಗಳಲಿ ಸೆಳೆವನು
ಮಂತ್ರ ಸ್ಪರ್ಶದಲಿ ನುಡಿವನು
ಕೇರಿಯ ಹುಡುಗ;
ಹೆಸರೇನೆಂದು ಕೇಳಲು
’ಮುನ್ನ’ ಎಂದು ಹಿಂಜರಿದು ನುಡಿದು
ಕಾಣದಾದನು
Jul 19, 2009
ಓಂ ಬೀಚ್ ಟು ಕುಡ್ಲು ಬೀಚ್ (ಗೋಕರ್ಣದಲ್ಲಿ ವರ್ಷಾರಂಭ - ೩)
Dec 1, 2007 (ಅರ್ಧಕ್ಕೆ ಬಿಟ್ಟವುಗಳನ್ನೆಲ್ಲ ಪೂರ್ಣಗೊಳಿಸುವ ಸಂಕಲ್ಪದೊಂದಿಗೆ, ಎರೆಡು ವರ್ಷಗಳ ನಂತರ!)
ಬೆಳಿಗ್ಗೆ ೮ ರೊಳಗ್ಗೆ ಬೀಚ್ ತಲುಪಿದ್ವಿ. ನಾವು ಅಂದು ಕೊಂಡ ಹಾಗೆ ಬೀಚು ನಿರ್ಜನವಾಗಿತ್ತು. ಹಿಂದಿನ ರಾತ್ರಿ ಬೆಳದಿಂಗಳಲ್ಲಿ ಕತ್ತಲ ಅಗಾಧ ಒಡಲಿಂದ ಬೋರ್ಗರೆದು ನೊರೆಯಂತೆ ಬಂದು ದಡ ಬಡಿಯುತ್ತಿದ್ದ ಸಾಗರ ಶುಭ್ರ ಅಕಾಶದ ಬೆಳಕಿನಲ್ಲಿ ತನ್ನದೇ ಸ್ವಂತ ’ಓಷನ್ ಬ್ಲೂ’ ಬಣ್ಣದಲ್ಲಿ ಕಂಗೊಳಿಸುತ್ತಿತ್ತು. (ಅ ಕ್ಷಣ ಆ ನೋಟ ನನ್ನ ಕಣ್ ಬಿಂಬದಲ್ಲಿ ಹೇಗೆ ಕಾಣುತ್ತಿರಬಹುದೆಂದು ಯೋಚಿಸುತ್ತಿದ್ದೆ!). ಅದಕ್ಕೆ ಹೊಂದುವಂತೆ ಹಸಿರಂಚಿನ ತೀರ ಬೆಳ್ಳಗೆ ಕೋರೈಸಿತ್ತು. ಶೂ ತೆಗೆದು ತಣ್ಣಗಿನ ಉಸುಕಿನಲ್ಲಿ ಹೂತು ಹೋಗುವಂತೆ ಹೆಜ್ಜೆ ಹಾಕುತ್ತಾ ಸವಿದೆವು. ಎಷ್ಟೋ ಹೊತ್ತು ಸಾಗರದೆದೆ ಉಬ್ಬುತ್ತಾ ಇಳಿಯುತ್ತಾ, ತೊರೆಗಳನ್ನು ದಡಕ್ಕೆ ದೂಕುವುದನ್ನೇ ನೋಡುತ್ತಾ ಕುಳಿತೆವು. ಭುವಿಯ ಜೀವಜಲವಾಗಿರುವಾಗ ’ಉಸಿರಾಟ’ದ ಕಲ್ಪನೆ ಉಚಿತವೆನಿಸಿತು.
[ಕೆಲವು ವಿದೇಶಿ ಮಹಿಳೆಯರು ಹಿಂದಿನ ರಾತ್ರಿ ಚೆಲ್ಲಿದ ಬೀರ್ ಬಾಟಲ್, ಪ್ಲಾಸ್ಟಿಕ್ ಕವರ್ ಇತ್ಯಾದಿ ಕಸವನ್ನು ಹೆಕ್ಕಿ ಚೀಲಕ್ಕೆ ತುಂಬಿಕೊಳ್ಳುತ್ತಿದ್ದರು. ತಮ್ಮ ದೇಶವಲ್ಲವೆಂದು ಎಣಿಸದೆ ಶ್ರಮಾದಾನ ಮಾಡುತ್ತಿರುವ ಅವರ ಪ್ರಙ್ಞೆ, ಕಾಳಜಿ ಮೆಚ್ಚುವಂತದ್ದು].
ಆನಂತರ ಕೂಡ್ಲ ಬೀಚಿಗೆ ಹೋಗುವುದೆಂದಾಗಿ ಮೋಟಾರ್ ಚಾಲಿತ ದೋಣಿ ಹತ್ತಿದೆವು. ಅದೊಂದು ನೀಳ ದೋಣಿ. ನಡುವಿನಲ್ಲಿ ಇಬ್ಬರು ಕೂರಬಹುದಾದಷ್ಟು ಅಗಲ. ಹಿಂಬದಿಯಲ್ಲಿ ಒಬ್ಬನಿಗಷ್ಟೇ ಜಾಗ. ಅಲ್ಲಿ ಮೋಟಾರ್ ನಿರ್ದೇಶಿಸುತ್ತ ನಾವಿಕ ಕೂತಿದ್ದ. ಯಾವುದೇ ಲೈಫ್ ಜಾಕೆಟ್ ಇಲ್ಲದೆ ಹತ್ತಲು ಹೆದರಿಕೆಯಾದರೂ, ಜಾವಪಾಯವಾಗುವಂತ ಯಾವುದೇ ಸಂದರ್ಭ ಕಾಣದಿದ್ದರಿಂದ ಯೋಚಿಸಲಿಲ್ಲ. ಆದರೆ ತೀರದಿಂದ ಸುಮಾರು ದೂರ ಬಂದಾದ ಮೇಲೆ ಅಲೆಯ ಏರಿಳಿತ ದೋಣಿಯ ಅಳತೆಗಿಂತ ಸುಮಾರು ಪಟ್ಟಿದ್ದದ್ದು, ಶಾಕ್ ಸಹಿತ ಅನುಭವವಾಯಿತು. ದೋಣಿ ಮಗುಚುವುದನ್ನು ತಡೆಯುವಂತೆ, ನಾವು ವಿರುದ್ಧ ದಿಕ್ಕಿನಲ್ಲಿ ಬಾಗಿ ಏಕಾಗ್ರತೆಯಿಂದ ಬ್ಯಾಲೆನ್ಸ್ ಮಾಡುವ ಕಸರತ್ತೆಲ್ಲ ಸೀಕ್ರೆಟ್ ಆಗಿ ಮಾಡಿದೆವು. ಯಾರೊಬ್ಬರೂ ಮತಾಡುತ್ತಿಲ್ಲ. ನೋಡಿದರೆ, ಒಮ್ಮೆಗೇ ಸಮೀರ ಹಾಗೂ ಶರತ ದೋಣಿಯಲ್ಲಿದ್ದ ಎರೆಡು ಲೈಫ್ ಜಾಕೆಟ್‍ಗಳನ್ನು ಏರಿಸಿಕೊಂಡು ಬಿಟ್ಟಿದ್ದರು!
ಕುಡ್ಲ ಬೀಚಿನೆಡೆಗೆ ದೋಣಿ ತಿರುಗಿಸುವಷ್ಟರಲ್ಲಿ ಮೋಟರು ಆಫ್ ಆಗೋಯ್ತು! ಅದರಿಂದ ದೋಣಿ ಓಲಾಡುವುದು ಕಮ್ಮಿಯಾಗಿ ಸ್ಟೇಬಲ್ ಆಗಿದ್ದುದೊಂದೇ ಸಮಾಧಾನ. ಎಲ್ಲರೂ ತೀರದಿಂದ ಎಷ್ಟು ದೂರದಲ್ಲಿದ್ದೇವೆ, ಹತ್ತಿರದಲ್ಲಿ ಯಾವ ಬೋಟ್ ಇದೆ ಅಂತ ಅಂದಾಜು ಹಾಕುತ್ತಾ ಇದ್ದೆವು. ಯಾರಿಗೆ ಈಜು ಬರುತ್ತೆ ಅಂತ ಕೇಳಿದರೆ ಯರೂ ಮಾತಾಡ್ತಾ ಇಲ್ಲ. ಈ ನಡುವೆ ನಮ್ಮ ನಾವಿಕ ಮೋಟಾರ್ ಸ್ಟಾರ್ಟ್ ಮಾಡುವುದಕ್ಕೆ ಸರ್ಕಸ್ ಮಾಡ್ತಾ, ಅದ್ಯಾಕೋ ಅವನ ಅಸಿಸ್ಟೆಂಟ್‍ಗೆ ಆಳ ನೋಡಲು ಹೇಳಿದ. ದೋಣಿಯಷ್ಟೇ ಉದ್ದದ ಕೋಲೋಂದು ತಳದಲ್ಲಿಂದ ಎತ್ತಿ, ನೀರೊಳಗೆ ಇಳಿಸಿದ. ಅದು ಪೂರ್ತಿಯಾಗಿ ಒಳ ಹೋಗಿದ್ದನ್ನು ನೋಡಿ ಅವನೂ ಹೆದರಿಬಿಟ್ಟನೆಂದು ಅವನ ಮುಖ ಹೇಳುತ್ತಿತ್ತು. ಅಷ್ಟರಲ್ಲಿ ಮೋಟರ್ ಸ್ಟಾರ್ಟ್ ಆಯಿತು. ದಡವನ್ನು ಸಮೀಪಿಸುತ್ತಿದ್ದಂತೆ ಸ್ವಲ್ಪ ಸ್ವಲ್ಪವೇ ಜೀವ ಬಂತಂದಾಗಿ, ಎಲ್ಲರ ದ್ವನಿ ಎತ್ತರವಾಗಿತ್ತು!

[ಥ್ಯಾಂಕ್ಸ್ ಟು ಸೋಮ. ಎಲ್ಲಾ ಸಮಯದಲ್ಲೂ ಕೂಲ್ ಆಗಿರದೇ ಇದ್ದರೆ ಈ ಫೋಟೋಗಳಿರುತ್ತಿರಲಿಲ್ಲ.]
ಒಂದಷ್ಟು ಚಿತ್ರಗಳು
ಕಳೆದ ಕೆಲವು ತಿಂಗಳುಗಳಲ್ಲಿ ನೋಡಿದ, ಒಳ್ಳೆಯ ಪುಸ್ತಕಗಳನ್ನೋದಿದಷ್ಟೇ ತೃಪ್ತಿಯಿತ್ತ ಕೆಲವು ಚಿತ್ರಗಳ ಸಮೀಕ್ಷೆಗಿಳಿಯದೆ, ಒಮ್ಮೆ ನೋಡಿ ಎಂದು ಆಗ್ರಹಿಸುತ್ತಾ ನಿಮ್ಮ ಮುಂದಿಡುತ್ತೇನೆ.
ಮೋಟಾರ್ ಸೈಕಲ್ ಡೈರೀಸ್.
ರೆಡ್ ಲೈಕ್ ದಿ ಸ್ಕೈ.
ದಿ ವಿಲ್ಲೊ ಟ್ರೀ.
ಕಲರ್ ಆಫ್ ಪಾರಾಡೈಸ್.
ಚಿಲ್ದ್ರನ್ ಆಫ್ ಹೆವನ್.
ಅಡ್ವೆಂಚರ್ಸ್ ಆಫ್ ಶೆರ್ಲಾಕ್ ಹೋಮ್ಸ್.(ಟೀವಿ ಸೀರೀಸ್)
ಈ ಸೀರಿಸ್ ಬಗೆಗಿನ ಅತ್ಯುತ್ತಮ ರಿವ್ಯೂ ಇಲ್ಲಿದೆ -
Mar 29, 2009
ಮೌನ
ಇಳಿ ದಿನ
ಮೌನ
ಸಿರಿ ಗಗನ
ಮೌನ
ಗರಿ ಚಿಗುರು
ಮೌನ
ಬಿಸಿ ಮಣ್ಣ
ಮೌನ
ತಂಗಾಳಿ
ಮೌನ
ಎದೆ ಗೂಡಲೂ
ಮೌನ
ಸುಳಿವಿಲ್ಲದೆ
ಮೂಡಿದೆ
ಇಳೆ ಬಾನಿನ
ಮುಂಗಾರ ಕವನ
ಮೌನ
ಸಿರಿ ಗಗನ
ಮೌನ
ಗರಿ ಚಿಗುರು
ಮೌನ
ಬಿಸಿ ಮಣ್ಣ
ಮೌನ
ತಂಗಾಳಿ
ಮೌನ
ಎದೆ ಗೂಡಲೂ
ಮೌನ
ಸುಳಿವಿಲ್ಲದೆ
ಮೂಡಿದೆ
ಇಳೆ ಬಾನಿನ
ಮುಂಗಾರ ಕವನ
-05/06/08
Aug 23, 2008
ಅಲೂಗೆಡ್ಡೆ, ಮಂಜುಗಡ್ಡೆ ಮತ್ತು ಕಾಮನಬಿಲ್ಲು - 2
ಯಾವುದೇ ಅಲಂಕಾರದ ಪದಗಳನ್ನು ಬಳಸಿ ಹೇಳಿದರೂ, ಹಿಮಾಲಯದ ಭವ್ಯತೆ, ಅಗಾಧತೆ, ಸೌಂದರ್ಯದ ಅರಿವಾಗುವುದು ಪ್ರತ್ಯಕ್ಷವಾಗಿ ಕಂಡಾಗ ಮಾತ್ರ. ನಮ್ಮ ಪೂರ್ವಿಕರು ಹಿಮಾಲಯವನ್ನು ದೇವತೆಗಳ ವಾಸಸ್ಥಾನ, ಕೈಲಾಸ ಎಂದು ಕಲ್ಪಿಸಿರುವುದು ಅದೆಷ್ಟು ಅರ್ಥಪೂರ್ಣ ಎಂದು ಅರಿವಾಗುತ್ತದೆ.
ಕೆಳಗಿನ ಹಸುರು ಬಯಲುಗಳ ದಿಬ್ಬಗಳು ಕಳೆದು, ಬೆಟ್ಟದ ಕಡಿದಾದ ಮೇಲ್ಮೆ ಮೇಲೆ ಬೆಳೆದ ನೇರ ನೀಳ ಕೊನಿಫೆರಸ್ ಮರಗಳೂ ಕಳೆದ ನಂತರ, ವರ್ಷದ ಈ ಸಮಯದಲ್ಲಿ, ಎಲ್ಲಿ ನೋಡಿದರೂ ಹಿಮ! [ಅಲ್ಲಿಂದ ಬರಿಗಣ್ಣಲ್ಲಿ ನೋಡುವುದು ಅಪಾಯಕಾರಿ. ಸನ್ಗ್ಲಾಸ್ಗಳನ್ನು ಉಪಯೋಗಿಸಬೇಕಾಗುತ್ತದೆ.] ಶಿಖರದೆಡೆಗಿನ ಏರು ತಿರುವಿನ ದಾರಿಯಲ್ಲಿ, ಒಮ್ಮೆ ನಿಂತು 360 ಡಿಗ್ರಿ, ಪನೋರಾಮಾ ದ್ುಶ್ಯ ನೋಡಿದರೆ - ಎಲ್ಲವೂ ಶ್ವೇತ ಶುಭ್ರ ಶೀತಲ. ಅಲೆಯಲೆಯಾಗಿ ಹರಡಿರುವ ಇದೇ ಥರಹದ ಅನೇಕ ಹಿಮಾವ್ುತ ಪರ್ವತಗಳು, ದಿಗಂತದಲ್ಲಿ ಸಾಲಾಗಿ ನೀಲಿಯಲ್ಲಿ ಬಾನ್ ನಿಲುಕಿ ನಿಂತಿರುವುದು ಕಾಣುತ್ತದೆ. K2 ಪರ್ವದ ಶಿಖರದಲ್ಲಿ ತೆಗೆದ ಚಿತ್ರವೊಂದು ನೆನಪಿಗೆ ಬಂತು [http://www.cascadeclimbers.com/plab/data/513/Abott_Panorama.JPG]. ಅದರಷ್ಟು ಎತ್ತರವಿರದಿದ್ದರೂ, ಯಾರೇ ಆದರೂ ಭಾವುಕರಾಗಿ 'ಹೈ' ಅಥವಾ 'ಇಲೇಷನ್' ಅನುಭವಿಸುತ್ತಾರೆ. ಕೆಲವರಿಗೆ ಎಲ್ಲವೂ ದೈವ ರೂಪಿಯಾಗಿ ಕಂಡು ಭಕ್ತಿಯ ಭಾವ ಮೂಡಿದರೆ, ಕೆಲವರಿಗೆ ಅದು ಸಾಹಸದ ಸಫಲತೆಗಳ ಭಾವಾತಿರೇಕ.
ಚಾರಣದ ಮುಖ್ಯ ಕ್ಯಾಂಪ್ಗಳೆಂದರೆ - ತಿಲಾ ಲೋಟ್ನಿ (Tila Lotni) ಮತ್ತು ಬಿಸ್ಕೆರಿ ಥಾಚ್ (Biskeri Thatch). ತಿಲಾ ಲೋಟ್ನಿ - ಟ್ರೆಕ್ಕಿನಲ್ಲೇ ಎತ್ತರದ ಹಾಗೂ ಸರ್ಪಾಸ್ ತುದಿಯ ಮುಂಚಿನ ಕ್ಯಾಂಪ್. ಮೇ ತಿಂಗಳ ಬೇಸಿಗೆಯಲ್ಲೂ ಹಿಮಪಾತವಾಗುತಿದ್ದರೆ, ಇದು ಸಂಪೂರ್ಣವಾಗಿ ಹಿಮದಲ್ಲಿ ಮುಚ್ಚಿರುತ್ತದೆ. ಟೆಂಟ್‌ಗಳು ಹಿಮದ ಹಾಸಿನ ಮೇಲೆ. ಕ್ಯಾಂಪ್ ತಲುಪುವ ವೇಳೆಗಾಗಲೇ, ಮಧ್ಯಾಹ್ನದ ಅವಧಿ ದಾಟಿರುವುದರಿಂದ ಹಿಮ ಬೀಳುತ್ತಿರುತ್ತದೆ, ಅದರೊಡನೆ ಶೀತಲ ಗಾಳಿಯೂ ಬೀಸಿದರೆ, ನಡಿಗೆಗೆ ಬೇಕಾದ ಏಕಾಗ್ರತೆಯನ್ನು ಕೆಡಿಸಿ ಕಿರಿಕಿರಿ ಮಾಡುತ್ತದೆ. ಹೇಗೋ, ಕ್ಯಾಂಪ್ ತಲುಪಿ ಬೆಚ್ಚಗೆ ಹೊದ್ದು ಕೂರೋಣ ಅಂದರೆ ಜ್ವರ ಹಿಡಿಯುವ ಭಯ. ಏರ್ ಡೆನ್ಸಿಟಿ ಕೂಡ ಇಲ್ಲಿ ಕಡಿಮೆಯಿರುವುದರಿಂದ, ಉಸಿರಾಟದ ತೊಂದರೆಯಾಗಬಹುದು. ಹಾಗಾಗಿ ಒಟ್ಟಾರೆ ಚಾರಣದಲ್ಲಿ, ತಿಲಾ ಲೋಟ್ನಿ ಬಹು ಮುಖ್ಯ.
ಈ ಕ್ಯಾಂಪಿನಲ್ಲಿ ಇರುವಷ್ಟು ಕಾಲ, ನಮ್ಮನ್ನು ನಾವು ಅದೆಷ್ಟು ಶಪಿಸಿಕೊಂಡೆವೋ ಗೊತ್ತಿಲ್ಲ. 'ನಾವ್ಯಾಕೆ ಇಲ್ಲಿಗೆ ಬಂದ್ವಿ' ಅಂತ ಕೇಳ್ಕೊಂಡಿದ್ದಿದೆ. ಅಷ್ಟೋಂದು ಕಷ್ಟವಾಗಿತ್ತು ಅಂತಲ್ಲ. ಆದ್ರೆ, ಯಾಕ್ ಬೇಕಿತ್ತು ಅನ್ನೋ ರೀತಿ :) ಆದರೆ ಈಗ ಹಿಂತಿರುಗಿ ನೋಡಿದರೆ, ದಟ್ ವಾಸ್ ದ ಬೆಸ್ಟ್ ಕ್ಯಾಂಪ್. ಹಿಮಾಲಯ ಪರ್ವತ ಶ್ರೇಣಿಯಲ್ಲೆಲ್ಲೋ ೧೨ ಸಾವಿರ ಅಡಿ ಬೆಟ್ಟದೆತ್ತರದಲ್ಲಿ, ಹಿಮಪಾತದ ನಡುವೆ ಸ್ಲೀಪಿಂಗ್ ಬ್ಯಾಗ್ ಒಳಗೆ ಜಾರಿ ಬೆಚ್ಚಗೆ ಮಲಗುವುದರಲ್ಲಿರೋ ಮಜಾನೇ ಬೇರೆ!

ಬಿಸ್ಕೆರಿ ಥಾಚ್ ಎಲ್ಲಾ ಕ್ಯಾಂಪುಗಳಲ್ಲಿ ಅತ್ಯಂತ ಸುಂದರವಾದುದು. ತಿಲಾ ಲೋಟ್ನಿಯಿಂದ ಸರ್ಪಾಸ್ ಹತ್ತಿ ಅತ್ತ ಇಳಿದರೆ ಬಿಸ್ಕೆರಿ ಥಾಚ್ ಸಿಗುತ್ತದೆ. ಒಂದು ದಿನದ ನಡಿಗೆ/ಚಾರಣ. ಅಲ್ಲಿನ ಪರಿಸರ ತಿಲಾ ಲೋಟ್ನಿಗೆ ವ್ಯತಿರಿಕ್ತವಾದುದು. ಸಣ್ಣ ಝರಿಗಳು, ಒಂದಷ್ಟು ಹಿಮ, ಮಿಕ್ಕಂತೆ, ಹಸಿರೇ ಹಸಿರು. ದೂರದಲ್ಲಿ ಹಿಮಾವ್ುತ ಗಿರಿಗಳು. ಆ ಗಿರಿಗಳ ಮೇಲೆ ಮೆಲ್ಲಗೆ ತೇಲಿ ಕರಗುವ ಮೋಡಗಳು.. ಕಡೆದು ಮಾಡಿಸಿದಂತ ಕಪ್ಪು ಬಂಡೆಕಲ್ಲುಗಳ ಬೆಟ್ಟಗಳ ಒಡಲು.. ಪುಟವಿಟ್ಟಂತೆ, ಒಂದು ಕಾಮನಬಿಲ್ಲು! ಬಿಸ್ಕೆರಿಯಲ್ಲಿ ನಾವು ತೆಗೆದ ಫೋಟೋಗಳಿಗೆ ಲೆಕ್ಕವೇ ಇಲ್ಲ.

ಮುಂದುವರೆಯುತ್ತದೆ...
Aug 9, 2008
ಕೆಂಡ ಸಂಪಿಗೆಯಲ್ಲಿ
ಕನ್ನಡದ ಜನಪ್ರಿಯ ಇ-ಮ್ಯಾಗ್ ಕೆಂಡ ಸಂಪಿಗೆಯಲ್ಲಿ, ದಿನದ ಬ್ಲಾಗ್ ಪುಟದಲ್ಲಿ - 'ಪದ ನಾಲ್ಕು ಸಾಲಾಗಿ' ಆಯ್ಕೆಯಾಗಿತ್ತು. ಇಲ್ಲಿ ನೋಡಿ - http://kendasampige.com/article.php?id=450.
ನಿಮಗೆ ಅಲ್ಲಿ ಇನ್ನೂ ಉತ್ತಮ ಬ್ಲಾಗ್ ಗಳು ಸಿಗುತ್ತವೆ. ವಿಹರಿಸಿ.
ನಿಮಗೆ ಅಲ್ಲಿ ಇನ್ನೂ ಉತ್ತಮ ಬ್ಲಾಗ್ ಗಳು ಸಿಗುತ್ತವೆ. ವಿಹರಿಸಿ.
Subscribe to:
Posts (Atom)