...ಅಂತ ’ಹಾಡಿ’ ಎರೆಡು ದಿನದ ಮುಂಚಿಂದ ಎಲ್ರಿಗೂ ತಲೆ ತಿಂತಾ ಇದ್ದೆ. ಶನಿವಾರ ಮೈಸೂರಿನಿಂದ ಬಿಳಿಗಿರಿ ರಂಗನ ಬೆಟ್ಟ, ಭಾನುವಾರ ನವೀನನ ಮನೆ ಗೃಹಪ್ರವೇಶ(ದ ನೆಪ). ಗಿಫ್ಟ್ ಬಗ್ಗೆ ಯಾರಿಗೂ ಯೊಚನೆ ಇಲ್ಲ. ವಿಕ್ಕಿ ಮನೆಲ್ಲಿ ಟೆಂಟು; ಎನಾದ್ರೂ ಹಣ್ಣೊ, ಸ್ವೀಟ್ಸೊ ತಗೊಂಡೋಗ್ಬೇಕು ಅನ್ನೊ ಸೌಜನ್ಯ ಕೂಡ ಯಾರಿಗೂ ಇಲ್ಲ.. ಹ್ಞಾ.. ನನ್ನನ್ನೂ ಒಳಗೊಂಡು.
ಟ್ರಿಪ್ಪಿನ ಹೈಲೈಟ್ - ನಾನ್ ಕಾರ್ ಓಡ್ಸಿದ್ದು. ಹೌದು. ಫರ್ಸ್ಟ್ ಟೈಮ್; ಚೆನ್ನಾಗೇ ಓಡಿಸ್ದೆ. ಓಡಿಸ್ತಾ ಇದ್ದೆ. ಆದ್ರೆ, ಸಂಜೆ ಇದ್ದಕ್ಕಿದ್ದಂಗೆ ಮಳೆ ಬಂತು. ವೈಪರ್ ಆನ್ ಮಾಡೋದ್ ಹೇಗೇಂತ ಕೇಳ್ದೆ ಅಷ್ಟೇ.. ಈಗಿನ ಕಾಲ್ದಲ್ಲಿ ಜನ್ರಿಗೆ ನಂಬ್ಕೆ ಅನ್ನೋದೆ ಇಲ್ಲ ಬಿಡಿ. (ನನ್ನ ಡ್ರಿವಿಂಗ್ ಲೈಸೆನ್ಸ್ ಕೂಡ ತೋರಿಸ್ದೆ).
ಚಾಮರಾಜನಗರ, ಮೈಸೂರು ಜಿಲ್ಲೆಗಳ ಹಳ್ಳಿಗಾಡು ಹೊಲಗಳ ನಡುವೆ ಓಡೋ ರಸ್ತೆಯಲ್ಲಿ ಸಾಗಿದ್ದು, ಟ್ರಿಪ್ಪಿನ ಹೈಲೈಟ್. ಉದ್ದಕ್ಕೂ ಒಳ್ಳೆ ನೀರಾವರಿ ಸೌಕರ್ಯ. ಕಾವೇರಿ ನದಿ ಬೇರೆ. ನದಿ, ಇಲ್ಲವೆ ಕಾಲುವೆ, ರಸ್ತೆಗೆ ಅಡ್ಡಹಾಯುತ್ತಿದ್ದದ್ದು ಸರ್ವೇ ಸಮಾನ್ಯ ದೃಶ್ಯವಾಗಿತ್ತು. ಮಕ್ಕಳು ಸ್ಕೂಲಿನಿಂದ ವಾಪಸ್ ಬರ್ತಾ ಬ್ರಿಡ್ಜ್ ಮೂಲಕ ನದೀನ ಹಾದು ಊರಿಗೆ ಹಿಂತಿರುಗೋದ್ ನೋಡಿ ಅಸೂಯೆ ಆಯ್ತು.
ಮಳೆಗಾಲ ಬೇರೆ! ಎಲ್ರೂ ಹೊಲ ಗದ್ದೆಗಳ ಕೆಲಸದಲ್ಲಿ ಮಗ್ನ. ಕೆಲವ್ ಕಡೆ ಎತ್ತುಗಳು, ಇತ್ತ ಕಡೆ ಮಾಡರ್ನ್ ಮಷೀನ್‍ಗಳು. ಮಳೆ ಬಂದ್ರೂ ಯಾವುದೂ ನಿಲ್ಲಲ್ಲ! ಪಟ್ಟೆಗಳಲ್ಲಿ ನಿಲ್ಸಿದ ನೀರಿನ ಹಾಳೆ, ಬಿಸ್ಲಿಗೆ ಬೆಳ್ಳಗೆ ಹೊಳೆದು ಕಣ್ಣ ಕೋರೈಸ್ತಿತ್ತು. ಇಳಿಜಾರಿನ ಪ್ರದೇಶಗಳಲ್ಲಿ ಮೇಲಿನ್ ಪಟ್ಟೆಗಳಿಂದ ಕೆಳಗಿನವಕ್ಕೆ, ಸಣ್ಣ ತೂತೊಡೆದು ನಿಯಂತ್ರಿತವಾಗಿ ನೀರು ಬಿಟ್ಟಿದ್ದು - ಸಣ್ಣ ಸಣ್ಣ ಜಲಪಾತಗಳಂತೆ ಕಾಣ್ತಿದ್ವು. ನನಗೋ, ಯಾವುದೋ ಪೂರ್ವ ಜನ್ಮದ ನೆನಪಾದಂಗೆ ಆಗ್ತಾ ಇತ್ತು. ಏನಾದ್ರೂ ನಿಜ್ವಾಗ್ಲೂ ಹಿಂದಿನ್ ಜನ್ಮದಲ್ಲಿ ರೈತನಾಗಿ ಹೊಲದಲ್ಲಿ ದುಡಿತಾ ಇದ್ನಾ? ರೋಮಾಂಚನವಾಯ್ತು!
ದರ್ಶನ ಮಾಡ್ಕೊಂಡು ’ರಾಮಕೃಷ್ಣ ಕುಟೀರ’ಕ್ಕೆ ಬಂದ್ವಿ. ಸ್ವಾಮೀಜಿಗಳ ಆಶೀರ್ವಾದ ಪಡೆದು, ಅವರ ಸಲಹೆಯಂತೆ, ’ಕೆ.ಗುಡಿ’ಯ ದಾರಿ ಹಿಡಿದ್ವಿ. ಈ ದಾರಿಯಲ್ಲಿ ಕಾಡು ಇನ್ನೂ ಹೆಚ್ಚು ಒತ್ತೊತ್ತು ಹಾಗೂ ವನ್ಯಜೀವಿಗಳನ್ನ ನೋಡ್‍ಬಹುದೆಂಬುದಾಗಿ. ನಿರಾಸೆಯಾಗ್ಲಿಲ್ಲ - ಜಿಂಕೆ, ಕಾಡು ಕೋಣ, ಕರಡಿ ಮುಂತಾದವುಗಳನ್ನ ಕ್ಯಾಮೆರ ಕಣ್ಗಳಲ್ಲಿ ಸೆರೆ ಹಿಡಿದ್ವಿ. ಪ್ರದೀಪನ ಗಂಟ್ಲಿಗೆ ಹೆದ್ರಿ ಇನ್ ಕೆಲ್ವು ಓಟ ಕಿತ್ವು. ಕರಡಿಯಂತೂ ಇವ್ನ್ ಕಡೆ ನೋಡಿ ಗುರುತಿರೋ ಹಂಗೆ, ತಲೆಯಾಡ್ಸಿ ಹೋಯ್ತು.
ರಾತ್ರಿ ಮೈಸೂರಿಗೆ ವಾಪಸ್ಸಾಗೋವಾಗ ಸಿಕ್ಕಾಪಟ್ಟೆ ಮಳೆ - Just what I wanted.
No comments:
Post a Comment