ರಜೆ ಮೇಲೆ ಊರಿಗೋಗಿದ್ದೆ. ಬೆಳಿಗ್ಗೆ ಬೆಳಿಗ್ಗೆ ನನ್ನ ತಂದೆ ಸ್ನೇಹಿತರೊಬ್ಬರು ನನ್ನನ್ನೇ ಕೇಳ್ಕೊಂಡ್ ಬಂದ್ರು. ಅವರದು ನೋಕಿಯ ಹ್ಯಾಂಡ್‍ಸೆಟ್. ಪೇಪರ್‌ನಲ್ಲಿ ಬ್ಯಾಟರಿ ಪ್ರಾಬ್ಲಮ್ ಬಗ್ಗೆ ಓದಿ, ಎಸ್ಸೆಮ್ಮೆಸ್ ಕಳ್ಸಿದ್ದಾರೆ. ರಿಪ್ಲೈ ಬಂದಿಲ್ಲ. "ಯಾಕೋ ರಿಪ್ಲೈ ಬರ್ತಾನೇ ಇಲ್ಲ, ನಮ್ ಆಫೀಸ್‍ನಲ್ಲೆಲ್ರಿಗೂ ಬಂದಿದೆ.. ಏನ್ ಮಾಡೋದು" ಅಂತ ಗಾಬರಿಯಾಗಿ ನನ್ನ ’ಎಕ್ಸ್‍ಪರ್ಟ್ ಅಡ್‍ವೈಸ್’ ಕೇಳಿದರು. "ಎಸ್ಸೆಮ್ಮೆಸ್ ಬಂದೇ ಬರುತ್ತೆ. worst case ಒಂದು ದಿನ ಆಗ್‍ಬಹುದು, ವೈಟ್ ಮಾಡಿ" ಅಂದೆ. ಅವ್ರಿಗೆ ಸಮಾಧಾನ ಆಗ್ಲಿಲ್ಲ. ಸರಿ ಅಂತ ನಾನೊಂದ್ ಸಲ ಮೆಸ್ಸೇಜ್ ಕಳಿಸ್ದೆ. ಸ್ವಲ್ಪ ಹೊತ್ತಿಗೇ ರಿಪ್ಲೈ ಬಂತು - "..you may continue to use your battery.."
ಅವ್ರಿಗೆ ತುಂಬಾ ನಿರಾಸೆ ಆಯ್ತು - "ಹೌದಾ? ಹಾಗಾದ್ರೆ ಬ್ಯಾಟರಿ ಚೇಂಜ್ ಮಾಡ್ಬೇಕಾಗಿಲ್ವ?" ಅಂತ ಸಪ್ಪಗಾದ್ರು.
ಹೌದಲ್ಲ?! ಬ್ಯಾಟರಿ ಚೇಂಜ್ ಮಾಡ್ಬೇಕು ಅಂತ ಮೆಸೇಜ್ ಬಂದಿದ್ದಿದ್ರೆ, ಸ್ವಲ್ಪ ಎಕ್ಸೈಟಿಂಗೆ ಇರ್ತಿತ್ತು. ಜನ ಚೇಂಜ್ ಕೇಳ್ತಾರೆ!
1 comment:
your site is loading fast
Post a Comment