ದೀಪದ ಬೆಳಕಿಂದ ಕಂಗೊಳಿಸಬೇಕಿದ್ದ ರಾತ್ರಿ, ಪಟಾಕಿಗಳ ಸದ್ದು ಗದ್ದಲದಿಂದ, ಹೊಗೆಯಿಂದ ತುಂಬಿತ್ತು. ಕಿಟಕಿ ಬಾಗಿಲು ಮುಚ್ಚಿ, ಹಲ್ ಕಚ್ಕೊಂಡ್ ಟಿ.ವಿ. ನೋಡ್ತಿದ್ದೆ. "ಹಚ್ಚೇವು ಕನ್ನಡದ ದೀಪ" ಹಾಡಿನ ಸಮೂಹಗಾನ ಬರ್ತಿತ್ತು. ಆಗ ಒಮ್ಮೆಗೇ...
*ಧಡೋಮ್* *ಧಡೋಮ್*
ಆ ಸದ್ದಿಗೆ ಕಿಟಕಿ ಗಾಜು ಒಡೆದು ಹೋಗೋ ಹಾಗೆ ನಡುಗಿತ್ತು. ಅವ್ನ್ ಯಾವನವ್ನು ಅಂತ ಆಚೆ ಹೋದೆ. ನಾಲ್ಕಾರು ಚಿಲ್ಟಾರಿಗಳು ಉದ್ದನೆ ಊದುಬತ್ತಿ ಹಚ್ಕೊಂಡು ದೊಡ್ ದೊಡ್ ಪಟಾಕಿ ಹೊಡಿತಿದ್ರು, ಮತಾಪೋ ಹೂವಿನ್ ಕುಂಡನೋ ಹಚ್ಚೊದ್ ಬಿಟ್ಟು.
ಮುಖ ಗಂಟ್ ಹಕ್ಕೊಂಡು ಕೇಳ್ದೆ "ಇನ್ನೂ ಎಷ್ಟಿದೆ?"
ಆಗ ಹಳದಿ ರೇಶ್ಮೆ ಲಂಗ ತೊಟ್ಟ ಪುಟ್ಟಿ - "ಅಣ್ಣ ಎರಡೇ ಎರ್‍ಡು" ಅಂದ್ಲು, ಮೂರ್ ಬೆರಳ್ ತೋರುಸ್ತಾ.. ಏನ್ ಮಾಡೂಂತಿರ?
No comments:
Post a Comment