ಅಕ್ಷರಮಾಲೆ ಕಲಿತು, ಕಾಗುಣಿತಾಭ್ಯಾಸ ಆದರೂ ನನ್ನ ಮಗ ಕನ್ನಡ ಓದಲು ಕಷ್ಟ ಪಡುತ್ತಿದ್ದ. ‘ಅಪ್ಪಾ.. ಕನ್ನಡ ಓದೋದು ಕಷ್ಟ.. ಇಂಗ್ಲಿಷ್ ಈಜಿ’ ಅಂತ ರಾಗ ಎಳೆಯುತ್ತಿದ್ದ. ಆಗ ನಾನವನಿಗೆ, ‘ಕನ್ನಡ ತುಂಬಾ ಸುಲಭ ಕಾಣೋ, ಇಂಗ್ಲಿಷ್ ನಲ್ಲಿ ಸೈಲೆಂಟ್ ಅಕ್ಷರ ಇರ್ತಾವೆ, ಒಂದೇ ಅಕ್ಷರಕ್ಕೆ ಬೇರೆ ಬೇರೆ ಉಚ್ಛಾರ ಇರುತ್ತೆ ಅಂತ ಉದಾಹರಣೆ ಕೊಟ್ಟು - ಕನ್ನಡದಲ್ಲಿ ಹಾಗಲ್ಲ. ಕೇಳಿದಂತೆ ಬರೆಯಬಹುದು, ಬರೆದಂತೆ ನುಡಿಯಬಹುದು' ಎಂದು ಗರ್ವದಿಂದ ಹೇಳಿದೆ. ಸ್ವಲ್ಪ ಗಮನಿಸಿ ನೋಡಿದಾಗ ಒತ್ತಕ್ಷರಗಳನ್ನ ಕೂಡಿಸಿ ಓದಲು ಕಷ್ಟ ಪಡುತ್ತಿದ್ದ. ನನಗೆ ಆಗ ಹೊಳೆಯಿತು.! ಇಂಗ್ಲಿಷ್ನಲ್ಲಿ ಫೋನೆಟಿಕ್ ಸೀಕ್ವೆನ್ಸ್ ಹಾಗೂ ಬರೆಯುವ ಸೀಕ್ವೆನ್ಸ್ ಒಂದೇ ಇದ್ದಂತೆ, ಕನ್ನಡಲ್ಲಿಲ್ಲ - ಸ್ವಲ್ಪ ವ್ಯತ್ಯಾಸವಿದೆ.
ಉದಾಹರಣೆಗೆ 'ಶಕ್ತಿ' ಎನ್ನುವುದನ್ನು ಉಚ್ಛರಿಸುವಾಗ ಕ್ರಮವಾಗಿ - ಶ್, ಅ, ಕ್ , ತ್ , ಇ ಹೇಳುತ್ತೇವೆ. ಅದೇ ಕ್ರಮದಲ್ಲಿ sh, a , k , t , i ಎಂದು ಬರೆಯುತ್ತೇವೆ. ಆದರೆ ಕನ್ನಡದಲ್ಲಿ, ಬರೆವಾಗ ಕ್ ಹಾಗೂ ಇ ಮೊದಲೇ ಕೂಡಿಸಿ ಬರೆದು, ನಂತರ ತ್ ಒತ್ತು ಕೊಡುತ್ತೇವೆ. ಪದದಲ್ಲಿ 'ಕಿ' ಇದ್ದರೂ 'ಕಿ' ಎಂದು ಉಚ್ಚರಿಸುವ ಹಾಗಿಲ್ಲ! ಹಿಂದಿಯಲ್ಲಿ ಈ exception ಇಲ್ಲ ('शक्ति').
ನುಡಿದಂತೆ ಬರೆ. ಆದರೆ ಕಂಡಿಷನ್ಸ್ ಅಪ್ಲೈ !
--
ಆಗಾಗ ನೆನಪಿಸುಕೊಳ್ಳಲು ಹೀಗೊಂದು ಉದಾಹರಣೆ ಪ್ರಿಂಟ್ ಮಾಡಿ ಕೊಟ್ಟೆ.
No comments:
Post a Comment