ಊರಲ್ಲಿ, ಸಣ್ಣದಾಗಿ ಸೋನೆ ಶುರುವಾಯಿತು. ಈ ವರ್ಷ ಮಳೆ ಕೈ ಕೊಟ್ಟಿತ್ತು. ಎಷ್ಟೋ ದಿನದ ಮೇಲೆ ಮಳೆ ಬಂತು ಅಂತ ಕೊಡೆ ಹಿಡಿದು ಮಂದಸ್ಮಿತನಾಗಿ ನಡೆದು ಹೋಗುತ್ತಿದ್ದೆ . ಎದುರಿಗೆ ಬರುತ್ತಿದ್ದ ಹಿರಿಯ ಯಜಮಾನರು - "ಮಳೆ ಬರ್ತಿಲ್ಲ ಅಂತ ಜನ ಸಾಯ್ತಾ ಇದ್ರೆ, ಇಷ್ಟು ಸೋನೆಗೇ ಕೊಡೆ ಹಿಡೀತೀಯಾ?" ಎಂದು ಸ್ವಲ್ಪ ಕೋಪದಲ್ಲೇ ಗೊಣಗಿ ಹೋದರು!
(ಇದು ಕೆಲವು ವರ್ಷಗಳ ಹಿಂದಿನ ಘಟನೆ - ಇದರ ಮುಂದೆ ಏನೋ ಬರೆಯಲು ಹೊರಟಿದ್ದೆ. ಈಗ ಮರೆತು ಹೋಗಿದೆ. ಇಷ್ಟೇ ಸಾಕೆನಿಸಿತು..)
No comments:
Post a Comment