Mar 1, 2008
ಜಿಮ್ ಕಾರ್ಬೆಟ್ ಆಮ್ನಿಬಸ್
[Oxford university press, Rs.545]
ಜಿಮ್ ಕಾರ್ಬೆಟ್ ಪರಿಚಯ ಮಾಡಿಕೊಡುವ ಅಗತ್ಯವಿಲ್ಲ. 'A shot in the dark' - ಓದಿರುತ್ತೀರಿ. ನೂರಾರು ಯಾತ್ರಿಗಳನ್ನು ಕೊಂದ ರುದ್ರಪ್ರಯಾಗದ ನರಭಕ್ಷಕ ಚಿರತೆಯ ಅಂತ್ಯದ ಕಥೆಯದು. ಆ ಕಥೆಯನ್ನು ಓದುತ್ತಾ, ನೀವು ರೋಮಾಂಚಿತರಾಗಿದ್ದರೆ, ನೀವು jim corbett omnibus ಓದಲೇಬೇಕು. ಹಿಮಾಲಯದ ತಪ್ಪಲಿನ ಪ್ರಾಂತ್ಯಗಳಲ್ಲಿ, ಸಾವಿರಾರು ಜನರನ್ನು ಕೊಂದು ಅಲ್ಲಿನ ವಾಸಿಗಳನ್ನು ಭೀಕರ ಭಯದ ನೆರಳಿಗೆ ದೂಡಿ, ಸಾವು ನೋವುಗಳಿಂದ ಯಾತನೆಗೀಡುಮಾಡಿದ್ದ ನರಭಕ್ಷಕ ಹುಲಿ ಚಿರತೆಗಳನ್ನು ಬೇಟೆಯಾಡಿ ಕೊಲ್ಲುವ ಪ್ರಸಂಗಗಳನ್ನು, ಕಾರ್ಬೆಟ್ ಅದ್ಭುತವಾಗಿ ನಿರೂಪಿಸಿ ಬರೆದಿದ್ದಾರೆ - ಅವುಗಳ ಒಟ್ಟು ಸಂಗ್ರಹವೇ ಜಿಮ್ ಕಾರ್ಬೆಟ್ ಆಮ್ನಿಬಸ್.
ಪರ್ವತಮಯ ದುರ್ಗಮ ದಟ್ಟ ಕಾಡುಗಳಲ್ಲಿ, ಜೀವವನ್ನು ನರಭಕ್ಷಕನ ಮರ್ಜಿಯಲ್ಲಿಟ್ಟು, ಪ್ರತಿ ಕ್ಷಣ ಅಪಾಯವನ್ನು ಎದುರುನೋಡುತ್ತಾ, ಅದರ ಮುಂದಿನ ಹವಣಿಕೆಯನ್ನು ಊಹಿಸುತ್ತಾ, ಪ್ರತಿತಂತ್ರಗಳನ್ನು ಹೂಡುತ್ತಾ, ಅನಿರೀಕ್ಷಿತ ಪ್ರತಿಕೂಲಗಳ ನಡುವೆ ಬೇಟೆಯಾಡಿ ಕೊಲ್ಲುವುದನ್ನು ನೀವು ಅವನ ಸಾಹಸ ಧೈರ್ಯಗಳನ್ನು ಮೆಚ್ಚುತ್ತಾ ಸವಿಯಬಹುದು. ಪ್ಯಾರೆಲಲಿ, ಕಾರ್ಬೆಟ್ಗೆ ಕಾಡಿನ ಬಗೆಗಿರುವ ಆಳವಾದ ತಿಳುವಳಿಕೆ, ನಿಸರ್ಗದ ಬಗೆಗಿನ ಕಾಳಜಿ, ನೊಂದ ಹಳ್ಳಿಗರ ಅಳಲಿಗೆ ಸ್ಪಂದನ ಮತ್ತಿತರ ಸೂಕ್ಷ್ಮ ವಿವರಗಳು ತೆರೆದುಕೊಳ್ಳುತ್ತಾ ಹೊಗುತ್ತವೆ.
.. ಇನ್ನು ನಿಮ್ಮ ಓದಿಗೆ ಬಿಡುತ್ತೇನೆ. ತಪ್ಪದೇ ಓದಿ.
p.s: ಪುಸ್ತಕದ ಕೊನೆಯಲ್ಲಿ ಪ್ರಾಂತ್ಯಗಳ ನಕ್ಷೆಯಿದೆ - ನಿರೂಪಣೆಯ ಜೊತೆಜೊತೆಗೆ ನರಭಕ್ಷಕನ ವ್ಯಾಪ್ತಿ, ಜಾಡುಗಳನ್ನು ಗ್ರಹಿಸುವಲ್ಲಿ ಸಹಾಯಕ್ಕೆ ಬರುತ್ತದೆ.
Subscribe to:
Post Comments (Atom)
3 comments:
Chetan, nice post. I am trying to type Kannada and the qwerty is really driving me mad. How do you do it? Any tips for me? I am wondering if there is a onscreen keyboard or something that provides some reference - Anang
jim corbett hold the reader in suspension. being a shikari at the same time, he portrays it in words quite well.
@ಅನಂಗ್
ಥ್ಯಾಂಕ್ಸ್ ಕಣೊ.
@ಮೌನ
ಪ್ರತಿಕ್ರಿಯೆಗೆ ಧನ್ಯವಾದಗಳು. ಬ್ಲಾಗಿಗೆ ಸ್ವಾಗತ.
Post a Comment