Jan 11, 2008

ಕನಸು ಕಲ್ಪನೆಗಳಲಿ

ಇನಿ ದನಿಯಲಿ
ಮಾತನಾಡಿ
ಮುದಗೊಳಿಸುವವಳು ನೀನೆ

ಕನಸು ಕಲ್ಪನೆಗಳಲಿ
ಜೀಕಿ ನಲಿದು
ನಗುವವಳು ನೀನೆ

ಒಡನಾಟದಲಿ
ಸುಳಿವಿಲ್ಲದೆ ಮನದಲಿ
ಸುಳಿದಾಡಿದವಳು ನೀನೆ

ಎದೆಯ
ಮಾತು ಮಾತಿನಲಿ
ಸ್ಫುರಿಸುವ
ಹೆಸರು ನೀನೆ

ಅರಿವು ತಿಳಿವುಗಳಿರದೆ
ಕರಗಿದವನು ನಾನೆ

ಹೃದಯ ತಿಳಿದ
ನಿನ್ನೋಟದ ನುಡಿ
ಒಲವು ತಾನೆ?

11 comments:

Anonymous said...

yaru chethan adooooooooooooooo??????????....
nimmanne karagisi bittavaLu..?
tumbane chennagide ee kavan...nange bekadre ide kavnaana use madkoltini...:-) yarnadru impress madoke:-).....
thanks...:-)

chethan said...

dhaaraaLavaagi thago :)

Maruti said...

nangeno doubt kano chethan neene bardeerodu anta....neene bardidiya annodaadre nee khanditha yarannadru preeti maadirtiya...enantirappa?

chethan said...

thanks maru..
ella maaye !!

Sandeep Shande said...

ಅತಿ ಉತ್ತಮ, ಯೋಗರಾಜ್ ಭಟ್ ಅವರು ತಮ್ಮ ಮುಂದಿನ ಚಿತ್ರದಲ್ಲೇ ಈ ಪದ್ಯವನ್ನು ಬಳಸಬಹುದು.

Raveesh Kumar said...

ಮನಸ್ಸಿನ ಭಾವನೆಗಳನ್ನು ಗದ್ಯದಲ್ಲಿ ವ್ಯಕ್ತಪಡಿಸುವುದು ಸುಲಭ. ಪದ್ಯದಲ್ಲಿ ಸ್ವಲ್ಪ ಕಷ್ಟ. ಆದರೆ ನಿಮ್ಮ ಕವನದಲ್ಲಿ ಭಾವನೆಗಳು ಚೆನ್ನಾಗಿ ಮೂಡಿ ಬ೦ದಿವೆ. ನಿಮ್ಮ ಕವನಗಳು ತಮ್ಮ ಮು೦ದಿನ ಲೇಖನಗಳಲ್ಲೂ ಮು೦ದುವರಿಯಲಿ.

ರವೀಶ

chethan said...

ಶಾಂಡೆ:
ಅದ್ರಿಂದ ಫ್ಲಾಪ್ ಆಗ್‍ಬಿಡುತ್ತೆ :)

ರವೀಶ್:
ನನ್ನ ಬ್ಲಾಗಿಗೆ ಸ್ವಾಗತ. ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು.

ದೀಪಕ್ ಸೋಮಶೇಖರ said...

ತುಂಬಾ ಚೆನ್ನಾಗಿದೆ. ಅಭಿನಂದನೆಗಳು.

chethan said...

ದೀಪಕ್, ಧನ್ಯವಾದಗಳು.

Kavita said...

kavana tumba chennagide.. End maadiro reeti ishta aaytu..

chethan said...

ಕವಿತ,
ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು. ನನ್ನ ಬ್ಲಾಗಿಗೆ ಸ್ವಾಗತ :)