ಎಕ್ಸ್.ಪಿ. ಕಾರ್ಯಾಚರಣ ವ್ಯವಸ್ಥೆ ಸಂಪೂರ್ಣವಾಗಿ ಯೂನಿಕೋಡನ್ನು ಬಳಸಿ ಬೆಂಬಲಿಸಿದರೂ, ಅಪ್ಲಿಕೇಷನ್‌ಗಳು ಇನ್ನೂ ಹಳೆಯದಾದವುಗಳಾದ್ದು, ಅಕ್ಷರಗಳನ್ನು ansi ಎಂದು ಪರಿಗಣಿಸುವುದರಿಂದ ಇನ್ನೂ ಕೆಲವು ತೊಂದರೆಗಳಿವೆ. ಉದಾಹರಣೆಗೆ, acdc (ಹಳೆಯ) ಅಪ್ಲಿಕೇಷನ್ ಕನ್ನಡದಲ್ಲಿ ಹೆಸರಿಸಿದ ಚಿತ್ರಗಳನ್ನು (image/jpeg) ತೆರೆಯುವುದಿಲ್ಲ.
ಕನ್ನಡ user interfaceನ ಈಗಿನ ಸ್ಥಿತಿಯಲ್ಲಂತೂ, ಪದಗಳ ಅನುವಾದ ಹಾಸ್ಯಾಸ್ಪದವಾಗಿದೆ. closeಗೆ ‘ಮುಚ್ಚು’, runಗೆ ‘ಓಡಿಸು’ (ಇವು ತಪ್ಪೆಂದಲ್ಲ; ಇಂದಿನ ಭಾಷಾ ಬಳಕೆಯಲಿ ಅಭಾಸವಾಗಿವೆಯಷ್ಟೆ) ಇತ್ಯಾದಿ. ಆದರೆ, ತಂತ್ರಗ್ಞಾನಕ್ಕೆ ಸಂಬಂಧಪಟ್ಟ, ಸಂಬಂಧಪಡದ ಇಂಗ್ಲೀಷಿನ ಹಲವು ಪದಗಳ ಅನುವಾದ ನಿಜವಾಗಿಯೂ ಕಷ್ಟಕರವಾಗಿದೆ, ಸವಾಲಾಗಿದೆ. ಇಲ್ಲಿ ಓದಿ.
ಹಾಗೂ, ಕನ್ನಡ ಒಪನ್ ಟೈಪ್ ಫಾಂಟಗಳ ಕೊರತೆಯಿದೆ. ಈಗಿರುವ Arial Unicode MS ಹಾಗೂ ಮೈಕ್ರೊಸಾಫ್ಟ್‌ನವರ ‘ತುಂಗ’ ಫಾಂಟ್‌ಗಳು ಯಾವುದಕ್ಕೂ ಸಾಲವು. ಇಲ್ಲಿ ಓದಿ.
ಕಂಪ್ಯೂಟರ್‌ನಲ್ಲಿ, ಮಾಹಿತಿ ತಂತ್ರಗ್ಞಾನದಲ್ಲಿ ಕನ್ನಡ ಬಳಕೆಯ ಲಾಭ ಎಷ್ಟೆಂಬುದು ನಿಮಗೆ ತಿಳಿದೇ ಇದೆ.
No comments:
Post a Comment