Showing posts with label ವೈಯಕ್ತಿಕ. Show all posts
Showing posts with label ವೈಯಕ್ತಿಕ. Show all posts

Dec 27, 2025

ತಾರೆ

ನನ್ನೊಲವಿನ ತಾರೆ ನೀ 

ನಿನಗೆಲ್ಲಿ ಹುಟ್ಟು ಹಬ್ಬ?!


ನಿನ್ನ ಸುತ್ತ ಸುತ್ತುವ 

ನನಗಷ್ಟೇ ಪ್ರತೀ ವರ್ಷ !


ಇರಲಿ ,

ಹುಟ್ಟು ಹಬ್ಬದ ಶುಭಾಶಯಗಳು ನಮಗೆ !


---

- ನನ್ನ ಅರ್ಧಾಂಗಿಗೆ ಈ ವರ್ಷ ಬರೆದ ಎರೆಡು ಸಾಲುಗಳು 

May 30, 2010

ಪರಿಮಳದ ಜಾಡು

ನೆನಪಿನ ನೌಕೆ
ಸಾಲದು ಗೆಳತಿ
ನಿನ್ನೆದೆಯ ಲೋಕಕೆ!

ಪಯಣಿಸಲಿ ಹೇಗೆ,
ಕಂಗಳ ಕಾಂತಿಗೆ
ಸ್ಪರ್ಶದ ಮಿಂಚಿಗೆ
ಹುಚ್ಚೇರಿದೆ ಮನಕಡಲಿಗೆ

ಚಿಂತಿಸದಿರು ನೀ
ಉಸಿರಲಿ ಹಿಡಿದಿರುವೆ
ನಿನ್ನ ಪರಿಮಳವ;
ಕಂಪಿನ ಜಾಡನು ಹಿಡಿವೆ

ಒಲವಲಿ ಹೊಳೆಯುವ
ನಿನ್ನ ಕಣ್ ತಾರಾಗಣವ
ಅನುಸರಿಸಿ ಬರುವೆ!
ನಿನ್ನೆದೆಯ ಲೋಕಕೆ!

Oct 21, 2006

A Turn Around

heart was heavy
grin on the face,
I was all down
cant say why

bunch of kids
on their school bus
were all at smiles,
waved me a bye

giant white cloud
stood from the rim,
like the Mt. Everest-
gave me a heavy sigh

[as i recall,]
was running hard
to catch my bus
and a stranger,
offered me a ride

was home early,
for any reason be-
she was happy
and so was I.